ಕನ್ನಡ
ಯೇಸು ರಾಜ ಬಂದಿರ್ವರು ನಾವೆಲ್ಲ ಕೊಂಡಾಡುವ ಕೈ ತಟ್ಟಿ ನಲಿದಾಡುವ ಕೊಂಡಾಡುವಾ ಕೊಂಡಾಡುವಾ ಚಿಂತೆಯ ಮರೆತು ನಲಿದಾಡುವ
ಕರೆದೊಡನೆ ಬಳಿ ಬರುವ ಕೊರತೆಯೆಲ್ಲಾ ನೀಗಿಸುವಾ ಆಸೆಯಿಂದಾ ಹುಡುಕಿದರೆ ಹೃದಯದಲ್ಲೇ ಬರುವ
ಮನಮರುಗಿ ಮನ್ನಿಸುವ ಪಾಪವೆಲ್ಲಾ ನೀಗಿಸುವಾ ನಿನಗಾಗಿ ಕೊರಗಿರುವ ಓಡಿ ಬಾ ನನ್ ಮಗನೆ-ಮಗಳೆ
ಕಣ್ಣೀರೆಲ್ಲಾ ಒರೆಸುವನು ಕರಹಿಡಿದು ನಡೆಸುವನು ಆಸೆಯೆಲ್ಲಾ ನಿನ್ ಬಯಕೆಯೆಲ್ಲಾ ಇಂದೇ ಪೂರೈಸುವಾ
ರೋಗವನ್ನು ನೀಗಿಸುವ ಕ್ಷಣದಲ್ಲೇ ಸುಖ ಕೊಡುವ ದೆವ್ವಗಳೆಲ್ಲಾ ನಡುಗುವವು ಉನ್ನತನ ಸನ್ನಿಧಿಯಲ್ಲಿ
ಪಾಪವನ್ನು ತೊಲಗಿಸುವ ಭಯವನೆಲ್ಲಾ ನೀಗಿಸುವಾ ಆತ್ಮನಿಂದಾ ತುಂಬಿಸುವ ಆತಿಶಯ ಮಾಡುವನು