ಯೇಸು ರಾಜಾ ನಿನ್ನ ನೋಡುವೆ

ಕನ್ನಡ

ಯೇಸು ರಾಜಾ ನಿನ್ನ ನೋಡುವೆ ನಿನ್ನ ನೋಡಿ ಪರವಶನಾಗುವೆ ||2|| ಮೊಣಕಾಲುರುವೇ ನಿನ್ನ ಕೈ ಮುಗಿಯುವೆ ಹಗಲಿರುಳು ನಿನ್ನ ಸನ್ನಿದಿಯಲ್ಲಿರುವೆ ||2|| 1.ಹೃದಯದ ಗಾಯ ಗುಣ ಪಡಿಸಲು ಕಣ್ಣಿರನೆಲ್ಲಾ ನೀ ಓರೆಸು ಬಾ ||2|| ದುಃಖವ ಮರೆಸಿ ಹರ್ಷವ ನೀಡಿ ನೋವನ್ನು ಮರೆಸಿ ನೂತನ ಮಾಡಿ ನಿನ್ನಲ್ಲಿ ಹೊಸದಾಗಿ ಚಿಗುರಿಸಲು ||2|| 2.ತುಸು ಎಳೆದುಕೋ ನಿನ್ನ ಬಳಿ ಬರುವೆ ನಾ ಹಂಬಲದಿಂದ ನಿನ್ನ ಕಾದಿರುವೆ ನಾ ||2|| ಕರುಣೆಯ ತೋರಿಸಿ ಪ್ರೀತಿಯ ತುಂಬು ದಯೆಯನ್ನು ತೋರಿಸಿ ದರುಶನ ನೀಡು ||2|| ನಿನ್ನ ಪ್ರಸನ್ನತೆಯಲ್ಲಿ ಅರಳಬೇಕು ||2|| 3.ಒಂದು ಋಣವು ನನ್ನ ಮೇಲೆ ನಿಶ್ಚಯವಾಗಿದೆ ರಕ್ಷಣೆಯ ಪಾತ್ರೆ ಹೊತ್ತು ತೀರಿಸಬೇಕು ||2|| ಕರುಣಾಸಾಗರ ಕೃಪೆಯನ್ನು ತೋರಿಸು ಅದ್ಭುತ ಸೂಚಕ ಕಾರ್ಯವ ಮಾಡು ||2|| ನಿನ್ನ ರಾಜ್ಯ ನೀತಿಗಾಗಿ ದುಡಿಯಬೇಕು ||2||