ಯೇಸುವೆ ಮಾರ್ಗವು

ಕನ್ನಡ

ಯೇಸುವೆ ಮಾರ್ಗವು ಯೇಸುವೆ ಸತ್ಯವು ಯೇಸುವೆ ಜೀವವು ಎಂದೆಂದಿಗೂ. ನಿನ್ನ ಆರಾಧಿಸುವೆ ನಿನ್ನ ಪ್ರೀತಿಸುವೆ ನನ್ನ ಜೀವಿತವೆಲ್ಲ ನಿನ್ನ ಹಿಂಬಾಲಿಸುವೆ. 1.ನನಗಾಗಿ ನೀನು ಶಿಲುಬೆಯ ಮೇಲೆ ಪರಿಶುದ್ಧ ರಕ್ತವ ಸುರಿಸಿದೆ. ನನ್ನ ಪಾಪ ಅಳಿಸಿ ನನ್ನ ರೋಗ ನೀಗಿಸಿದೆ. ಎಲ್ಲ ಗಾಯವನ್ನು ಸಹಿಸಿದೆ. ಮರಣವ ಜಯಿಸಿ ನಿತ್ಯ ಜೀವ ನೀಡಿದ ನನ್ನನ್ನು ನೀ ರಕ್ಷಿಸಿದೆ. 2.ಪರಿಶುದ್ಧ ಆತ್ಮನೇ ನನ್ನ ಸಹಾಯಕನೆ ಹೊಸ ಸೃಷ್ಠಿಯಾಗಿ ನನ್ನ ಮಾರ್ಪಡಿಸಿದೆ. ನನ್ನ ಕೊರತೆ ನೀಗಿಸಿ ಸಂಮೃದ್ಧಿ ನೀಡಿದೆ ಆಶೀರ್ವಾದ ನಿಧಿಯಾಗಿ ನನ್ನ ಮಾಡಿದೆ ನಿನ್ನ ಸೇವೆ ಮಾಡಲು ನನ್ನನ್ನು ಅಭಿಷೇಕಿಸು ನೂತನ ಕೃಪೆಯಿಂದ ತುಂಬಿಸು.