ಯೇಸುವೇ ಒಳ್ಳೆಯ ಕುರುಬನು

ಕನ್ನಡ

ಯೇಸುವೇ ಒಳ್ಳೆಯ ಕುರುಬನು ನಾನೆಂದೆಂದೂ ಕೊರತೆ ಪಡೆನು ||2|| 1.ಹಸಿರಾದಗಾವಲಿನಲ್ಲಿ ತಂಗಿಸಿರುವೆ ಜೀವಕರ ನೀರಿನಿಂದ ತೃಪ್ತಿಪಡಿಸುವೆ ||2|| ನನ್ನ ಪ್ರಾಣವನ್ನು ಉಜ್ಜೀವನ ಮಾಡಿ ನಡೆಸಿರುವೆ ||2|| 2.ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗ ನೀ ಹತ್ತಿರ ಇರುವಾಗ ಕೇಡಿಗೆ ಹೆದರೆನು ||2|| ನಿನ್ನ ದೊಣ್ಣೆ ಕೋಲು ನನಗೆ ಧೈರ್ಯ ಪಡಿಸುತ್ತದೆ ||2|| 3ವೈರಿಗಳ ಎದುರಿನಲ್ಲಿ ನನಗೋಸ್ಕರ ಔತಣವನ್ನು ಸಿದ್ಧ ಪಡಿಸಿರುವೆ ||2|| ನನ್ನ ತಲೆಗೆ ತೈಲ ಹಚ್ಚಿ ನನ್ನ ಪಾತ್ರೆ ತುಂಬಿ ತುಳುಕುವುದು ||2|| 4.ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ನಿನ್ನ ಶುಭವೂ ಕೃಪೆಯೂ ನನ್ನ ಹಿಂಬಾಲಿಸುವದು ||2|| ನಾನು ಸದಾಕಾಲ ಯೆಹೋವನ ಮಂದಿರದಿ ವಾಸಿಸುವೆ ||2||