ಯೇಸುವೇ ನಾವು ನಿನ್ನ ಆಲಯ

ಕನ್ನಡ

ಯೇಸುವೇ ನಾವು ನಿನ್ನ ಆಲಯ ಉಕ್ಕಿಸು ನಮ್ಮಲಿ ಜೀವ ಜಲ || ಜಲ…ಜಲ…ಜೀವ ಜಲ ಇದು ದೇವರ ಆತ್ಮನ ಬಲ || 1.ಓಡಿ ನಾವು ದಣಿಯದಂತೆ ನಡೆದು ನಾವು ಬಳಲದಂತೆ ದಯಪಾಲಿಸು ನಿನ್ನ ಆತ್ಮನ ಬಲ || ಜಲ|| ಯೇಸುವೆ|| 2.ದುರಾತ್ಮ ಸೇನೆಗಳ ಮೇಲೆ ನಾವು ಹೋರಾಡಿ ಜಯಹೊಂದಲು ದಯಪಾಲಿಸು ನಿನ್ನ ಆತ್ಮನ ಬಲ || ಜಲ || ಯೇಸುವೆ|| 3.ಅಂಧಕಾರ ಶಕ್ತಿಗಳ ಮೇಲೆ ನಾವು ಹೋರಾಡಿ ಜಯಹೊಂದಲು ದಯಪಾಲಿಸು ನಿನ್ನ ಆತ್ಮನ ಬಲ || ಜಲ || ಯೇಸುವೆ||