ಕನ್ನಡ
ಯೋಗ್ಯನು ನಾನಲ್ಲ ಪ್ರಭುವೇ
ನಿನ್ನ ಮುಂದೆ ನಾ ನಿಲ್ಲಲು
ಯೋಗ್ಯತೆ ನನಗಿಲ್ಲ ಪ್ರಭುವೇ
ಕೈಯೆತ್ತಿ ನಾ ಬೇಡಲು
1.ನಿನ್ನ ಮಾರ್ಗವ ತೊರೆದೆ ನಾನು
ನಿನ್ನಾ ಹೃದಯ ನೋಯಿಸಿದೆನು ನಾನು
ಯೋಗ್ಯತೆ ನನಗಿಲ್ಲ ಪ್ರಭುವೇ
ನಿನ್ನ ನಾಮವ ಜಪಿಸಲು
2.ಹೆತ್ತವರ ನೋಯಿಸಿದೆ ನಾನು
ಪ್ರೀತಿಸಿದವರನ್ನೇ ಮರೆತೆ ನಾನು
ಯೋಗ್ಯತೆ ನನಗಿಲ್ಲ ಪ್ರಭುವೇ
ನಿನ್ನ ಮಗನೆನಿಸಿಕೊಳ್ಳಲು
3.ಶುದ್ದ ಮನಸ್ಸು ನಿಡೆನೆಗೆ ದೇವಾ
ಶುಭವನ್ನು ಕರುಣಿಸು ಎನಗೆ
ನಿನ್ನ ಮಗನಾಗಿ ಬಾಳಲು
ನಿನಗೆ ಸಾಕ್ಷಿಯಾಗಿ ಬಾಳಲು