ರಾಜಾ ನಿನ್ ಉಪಕಾರವು ಅವು ಎಣಿಸಲು ಆಗದಯ್ಯ

ಕನ್ನಡ

ರಾಜಾ ನಿನ್ ಉಪಕಾರವು ಅವು ಎಣಿಸಲು ಆಗದಯ್ಯ ಸಲ್ಲಿಸುವೆ ಸ್ತೋತ್ರ ಬಲಿ ನನ್ ಜೀವ ಮಾನವು 1.ಮುಂಜಾನೆಯಲ್ಲಿ ತಟ್ಟಿ ತಟ್ಟಿ ಎಬ್ಬಿಸಿ ಹೊಸ ಕೃಪೆ ನೀಡಿರುವೆ ಆನಂದ ಮಳೆಯ ಸುರಿಸಿ ಸುರಿಸಿ ನಿನ್ನ ಆತ್ಮನಿಂದ ತುಂಬಿರುವೆ ಸ್ತೋತ್ರ ರಾಜಾ ಯೇಸು ರಾಜಾ 2.ಪ್ರತಿಯೊಂದು ದಿನವು ಉಣ್ಣಲು ತೊಡಲು ನೀಡಿ ಕಾಪಾಡಿದೆ ಸುಖ ಬಲ ನೀಡಿ ಕೊರತೆಯ ನೀಗಿ ಕೈ ಹಿಡಿದು ಕಾಪಾಡಿದೆ ಸ್ತೋತ್ರ ರಾಜಾ ಯೇಸು ರಾಜಾ 3.ವಾಕ್ಯದ ರಹಸ್ಯ ಅರಿಯಲು ತಿಳಿಯಲು ನಿನ್ ಬೆಳಕು ನೀಡಿರುವೆ ಪಾದದಿ ಕುಳಿತು ನಿನ್ ಸ್ವರ ಕೇಳುವ ಭಾಗ್ಯವ ನೀಡಿರುವೆ ಸ್ತೋತ್ರ ರಾಜಾ ಯೇಸು ರಾಜಾ 4.ಕಷ್ಟದ ಹಾದಿಯ ನಾ ಹಾದು ಹೊಗಲು ಹೆಗಲಲ್ಲಿ ಹೊತ್ತುಕೊಂಡೆ ಪ್ರೀತಿಯ ಹಸ್ತದಿ ಎದೆಗೆ ಅಪ್ಪಿಕೊಂಡು ಆದರಣೆ ನೀಡಿರುವೆ ಸ್ತೋತ್ರ ರಾಜಾ ಯೇಸು ರಾಜಾ