ರುಚಿನೋಡಿ ತಿಳಿದುಕೊಂಡೆಯೆ ಹೋವ ಉತ್ತಮನೆಂದು

ಕನ್ನಡ

ರುಚಿನೋಡಿ ತಿಳಿದುಕೊಂಡೆಯೆ ಹೋವ ಉತ್ತಮನೆಂದು ರಕ್ಷಕನಾಶ್ರಯಿಸಿ ಆರಾಧಿಸುವೆ ದಯಾಳು ನೀನೇ 1.ಮಹಾ ದೇವರು ನೀನೇ ಸ್ತುತಿ ಗಳಿಗೆ ಪಾತ್ರನು ನೀನೇ ತಪ್ಪದೇ ಆರಾಧಿಸುವೆ ದಯಾಳು ನೀನೇ 2.ಮಹೋನ್ನತನಾದೆ ದೇವಾ ಪ್ರಭಾವ ಇರುವಾತನೇ ಮನಸ್ಸಾರೆ ಹೋಗಳುವೆನು ನಿನ್ ಆಶ್ಚರ್ಯ ಕಾರ್ಯಗಳನ್ 3.ಒಳ್ಳೆತನ ಇರುವ ದೇವಾ ಅತಿ ಶ್ರೇಷ್ಠ ಎಲ್ಲರಲ್ಲಿ ಹೃದಯದಿ ಹಾಡುವೆ ನಿನ್ನ ಅತಿ ಸುಂದರನೆಂದು 4.ನನ್ ಜೀವಿತ ಕಾಲವೆಲ್ಲಾ ಯೆಹೋವನ ಸ್ತುತಿಸುವೆನು ನನ್ ಬದುಕು ಕಾಲವೆಲ್ಲಾ ನನ್ನ ದೇವರ ಕೀರ್ತಿಸುವೆ 5.ಸಂತೊಷಿಸುವೆವೆಂದಿಗೂ ಕಷ್ಟ ದುಃಖ ಬಾಧೆಯಲ್ಲಿ ಎಷ್ಟೋ ನೆಮ್ಮದಿ ಕೊಡುವೆ ನನ್ನ ರಕ್ಷಕ ಯೇಸು 6.ಪ್ರಾರ್ಥಿಸುವೆನು ಎಡೆಬಿಡದೆ ಪ್ರಭು ಸನ್ನಿಧಿಯಲ್ಲಿ ಸೇರಿ ಸಂಪೂರ್ಣವಾಗಿ ಹೊಂದುವೆನು ಕೇಳುವುದೆಲ್ಲವನ್ನು 7.ಕೃತಜ್ಞತೆ ಸಲ್ಲಿಸುವೆ ಪ್ರತಿಯೊಂದ ಕ್ಕಾಗಿ ನಾನು ಕ್ರಿಸ್ತನಲ್ಲಿಯೇ ತೃಪ್ತಿ ಹೊಂದಿ ಹರ್ಷಿ ಸುವೆನೆಂದು 8.ಶುದ್ದ ಸುವರ್ಣದಿಂದ ಅಲಂಕಾರ ಹೊಂದಿದ ಮುತ್ತಿನ ಬಾಗಿಲಿನ ಪಟ್ಟಣ ಸೇರಿಸಿದ ಆನಂದದಿಂದ ಪ್ರಣುತಿಸುವಾ