ಲೋಕ ಸುಳ್ಳಮ್ಮಾ, ಈ ಪ್ರೀತಿ ಸುಳ್ಳಮ್ಮ (೨)

ಕನ್ನಡ

ಲೋಕ ಸುಳ್ಳಮ್ಮಾ, ಈ ಪ್ರೀತಿ ಸುಳ್ಳಮ್ಮ (೨) ಯೇಸು ಪ್ರೀತಿಯು ಎಂದಿಗೂ ನಿಜವಮ್ಮ (ನನ್) (೨) ||ಲೋಕ|| ಲೋಕವೆಲ್ಲ ಮಾಯವಮ್ಮ, ಲೌಕಿಕ ಜೀವನ ಮರಣವಮ್ಮ, ಬಾಳುವುದು ಬಲು ಆಸೆ, ನಾಳೆಯ ಬದುಕೆ ಸ್ಥಿರವಲ್ಲಮ್ಮ , ನಿನ್ನಿಂದ ಕರ್ತನು, ಏನನ್ನೂ ಬಯಸನು (೨) ವಿಶ್ವಾಸ ಒಂದೆ ಸಾಕಮ್ಮ, ನಿನ್ನ ವಿಶ್ವಾಸ ಒಂದೆ ಸಾಕಮ್ಮ ||ಲೋಕ|| ಪ್ರೀತಿಯೊಂದು ಋಣವಮ್ಮ, ಶಾಶ್ವತ ಪ್ರೀತಿಯ ಮರೆವರಮ್ಮ, ಬಂಡುತನಕ್ಕೆ ದಾಸರಾಗಿ ನೆರೆಯವರ ತ್ಯಜಿಸ್ವರಮ್ಮ, ಏನೆಂದು ಹಾಡಲಿ, ಶಾಶ್ವತ ಪ್ರೇಮವೆಲ್ಲಿ (೨) ನನ್ನೇಸು ಪ್ರೀತಿಯೆ ನಿಜವಮ್ಮ ನನ್ನ ಯೇಸುವಿನ್ ಪ್ರೀತಿಯೆ ನಿಜವಮ್ಮ ||ಲೋಕ||