ಕನ್ನಡ
ವಿಜಯದ ಜೀವನವ ಭುವಿಯಲಿ ತಂದನು
ಸಾವಿನ ಭಯವನ್ನು ದೂರ ಸರಿಸಿದನು
ಮನುಕುಲಕೆ ಹರುಷವನು
ಜಗದಲಿ ತಂದಿಹನು
1.ಉರಿಳಿತು ಬಂಡೆಯು ನಮ್ಮಯ ಜೀವಿತದಿ
ಸರಿಸಿತು ಭಯವನ್ನು
ನೀಡಿತು ಶಾಂತಿಯನು
ಸಂತಸ ವಾರ್ತೆಯನ್ನು
ನಮಗಾಗಿ ನೀಡಿದೆನೀ
ಸ್ಮರಿಸುವೆವು ಹಾಡುವೆವು
ಮನದಿ ಕೊಂಡಾಡುವೆವು – ವಿಜಯದ
2.ಸುಮದುರ ಶಬ್ದವು ನೀಗಿತು ಕಳವಳವ
ಜೀವನ ಮಾರ್ಗಕ್ಕೆ
ನೀಡಿತು ಸಾಂತ್ವನವ
ಈ ಜಯ ವಾರ್ತೆಯನು
ಎಲ್ಲೆಡೆ ಸಾರುವೆವು
ಜೀವಿಸುವೆವು ನಿನಗಾಗಿಯೇ
ಸಾಕ್ಷಿಯ ನೀಡುವೆವು – ವಿಜಯದ