ವೇದ ವಚನವು ನಿನ್ ಧರ್ಮಶಾಸ್ತ್ರವು

ಕನ್ನಡ

ವೇದ ವಚನವು ನಿನ್ ಧರ್ಮಶಾಸ್ತ್ರವು ನನಗೆ ಪ್ರಿಯವು ತಂದೆ ನನಗೆ ಜೀವವು ಯೇಸು||2|| 1.ಜೇನು ಸೋಸಿದ ತುಪ್ಪಕ್ಕಿಂತಲೂ ನಿನ್ನ ವಾಕ್ಯ ಸಿಹಿಯಾದದ್ದು ವಾಕ್ಯ ಶಕ್ತಿವುಳ್ಳದ್ದು||2|| ವಾಕ್ಯ ನಂಬಿ ನಡೆದರೆ ಜೀವಿತವು ಸಿಹಿಯಾಗುವುದು ಬಾಳ ಫಲ ಸಿಗುವುದು ||2|| 2.ಬಂಗಾರ ಅಪರಂಜಿಗಿಂತಲೂ ನಿನ್ನ ವಾಕ್ಯ ಅಪೇಕ್ಷಿಸತಕ್ಕದ್ದು ನಿಧಿಯಾಗಿದೆ||2|| ವಾಕ್ಯ ನಂಬಿ ಬಾಳಿದರೆ ಒಳ್ಳೆ ಬೊಕ್ಕಸ ಯೇಸು ತಂದೆ ಮನೆಯಲ್ಲಿ ಬಿಡಾರಉಂಟು||2|| 3.ಇಬ್ಬಾಯಿ ಕತ್ತಿಗಿಂತಲು ನಿನ್ನ ವಾಕ್ಯ ಹದವಾದದ್ದು ಕಾರ್ಯ ಸಾಧಕವಾದದ್ದು||2|| ಮೂಳೆ ಮಾಂಸಗಳಲ್ಲಿ ತೂರಿ ಹೋಗುವಂತದ್ದು ಅಪ್ಟೆ ಕ್ರಿಯೇವುಳ್ಳದ್ದು ||2||