ಸಂಭ್ರಮದಿಂದಲೇ ಹಾಡುವೆನು ನಾನು

ಕನ್ನಡ

ಸಂಭ್ರಮದಿಂದಲೇ ಹಾಡುವೆನು ನಾನು ಯೇಸು ರಕ್ಷಕನ ಹೋಗಳುವೆನು 1.ಕತ್ತಲೆ ಮಾರ್ಗದಿ ನಡೆಯುವ ನನ್ನನ್ನು ಕನಿಕರದಿಂದಲೇ ಕರೆದಿದೆ ದೇವಾ ತಪ್ಪಿತ ಹೆಜ್ಜೆಯ ಗಮನಿಸಿ ನನ್ನ ಪ್ರಭು ನಡೆಸಿದಿ ಬೆಳಕಿನ ಹಾದಿಯಲ್ಲಿ – ಸಂಭ್ರಮದಿಂದಲೇ 2.ಯೇಸುವೆ ನನಗೆ ಜೀವದ ಬುಗ್ಗೇ ಯೇಸುವೆ ನನಗೆ ಜೀವದ ರೊಟ್ಟಿ ಯೇಸುವೆ ನನಗೆ ಸ್ವರ್ಗದ ಮಾರ್ಗ ಯೇಸುವೆ ನನಗೆ ಸರ್ವಸ್ವವು – ಸಂಭ್ರಮದಿಂದಲೇ