ಕನ್ನಡ
ಸಕಾಲದಲ್ಲು ಉನ್ನತ ನೀನೆ
ಸರ್ವದಲ್ಲು ಮೇಲಾದವ ನೀನೆ
ಆದರೆ ಕರುಣೆಯೊಳ್ ಐಶ್ವರ್ಯನೆ
ನಾ ನಿನ್ನನ್ನೆ ದೃಷ್ಟಿಸುವೇ
ಸಹಾಯ ಬೇಕು ದೇವಾ ಸಹಾಯ ಮಾಡು ದೇವಾ
ನನ್ನಿಂದಾಗದು ನಿನ್ನಿಂದ ಸಾಧ್ಯ
ಸ್ವಯ ಬಲದಿ ನನ್ನಿಂದ ಏನು ಆಗದು
ಯಾವ ತಡೆಯನ್ನು ನಾನು ದಾಟಲಾರೆನು
ಶಾರೀರ ಭಾವವು ನನ್ನ ಗೆಲ್ಲುತ್ತಿದೆ
ನಿನ್ ಆತ್ಮದಿ ನನ್ನ ಬಲಪಡಿಸು
ನನ್ ವಿವೇಕದಿ ಯಾವುದು ಆಗದು
ನನ್ ಸಾಮರ್ಥ್ಯದಿ ಜೀವಿಸಲಾಗದು