ಕನ್ನಡ
ಸ್ತುತಿ ಘನ ಮನ ಮಹಿಮೆ ಯೇಸು
ರಾಜನಿಗೆ ನನ್ನ ಹೃದಯದ ದೀಪಕ್ಕೆ
ಸ್ತೋತ್ರ ಮೇಘ ಸ್ತಂಭವೇ ಸ್ತೋತ್ರ ಅಗ್ನಿಸ್ತಂಭವೇ
1.ಸೆರಾಫಿಯರ ಮಧ್ಯದಲ್ಲಿ ಕೆರೂಬಿಯರ
ಮಧ್ಯದಲ್ಲಿ ವಾಸಿಸುವಾತನಿಗೆ ಸ್ತುತಿ
ಘನ ಮಹಿಮೆ ಇಬ್ಬರು ಮೂವರು ಸೇರಿ
ಬರುವ ಸ್ಥಳದಲ್ಲಿ ಆತ್ಮವ ಸುರಿಸ್ವವರೇ
2.ಭೂಮಿಯನ್ನು ಯಾವ ಆಧಾರವಿಲ್ಲದೆ
ತೂಗಿ ಹಾಕಿದವನೇ ಸ್ತುತಿ ಘನ ಮಹಿಮೆ
ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ
ಭೂಮಿಯಲ್ಲಿ ನಿನ್ನ ಪ್ರಸನ್ನತೆ ತುಂಬಿದೆ
3.ನಿನ್ನ ನಾಮದಲ್ಲಿ ಭಯಭಕ್ತಿ ಇಟ್ಟ ನನ್ನ
ಧರ್ಮವೆಂಬ ಸೂರ್ಯ ನೀನಾದೆ ಸ್ವಸ್ಥತೆಯನ್ನು
ಉಂಟು ಮಾಡುವ ಕಿರಣವುಳ್ಳವನಾಗಿ ಮೂಡಿದೆ ನೀ