ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ

ಕನ್ನಡ

ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ ನನ್ನ ಯೇಸು ರಾಜಾ ||2|| ಕರುಣೆ ಕೃಪೆಗಳ ಸಾಗರ ನೀನೆ ಓ ನನ್ನ ಪ್ರಿಯಾ ಮೆಸ್ಸಿಯಾ ||2|| ನನ್ನ ಪ್ರಿಯಾ ಮೆಸ್ಸಿಯಾ ಓ ನನ್ನ ಪ್ರಿಯಾ ಮೆಸ್ಸಿಯಾ ನೀ ನನ್ನ ಪ್ರಿಯಾ ಮೆಸ್ಸಿಯಾ ||2|| ಹಾ. ಹಾ. ಹಾ. ಹಲ್ಲೆಲೂಯ ಆ. ಆ. ಆರಾಧನೆ 1.ನನ್ನ ಬಾಯಿ ನಿನ್ನ ಸ್ತುತಿಸಿ ಹಾಡುತ್ತಿದೆ ||2|| ನನ್ನ ಹೃದಯ ಹರುಷದಿಂದ ನಿನ್ನನ್ನೇ ಕೊಂಡಾಡುತ್ತಿದೆ ||2|| ನೀ ಮಾಡಿದ ಮೇಲುಗಳ ಏನೆಂದು ವರ್ಣಿಸಲಿ ||2|| ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ 2.ನಿನ್ನ ಕೈಗಳು ನನ್ನ ರೂಪಿಸಿ ನಿಲ್ಲಿಸಿದೆ ||2|| ನಿನ್ನ ಮಂದಿರದ ಅಂಗಳದಲ್ಲಿ ಹಾಡುತ್ತಾ ನಲಿಯುವೆ ||2|| ನೀ ಮಾಡಿದ ಉಪಕಾರವ ಹೇಗೆ ನಾ ಬಣ್ಣಿಸಲಿ ||2|| ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ 3.ನನ್ನ ಆತ್ಮವು ನಿನ್ನಲ್ಲಿ ಹಿಗ್ಗುತ್ತಿದೆ ||2|| ನನ್ನ ಕಾಲನ್ನು ಜಿಂಕೆ ಕಾಲಂತೆ ಚುರುಕು ಮಾಡಿದೆ ನೀ ||2|| ನನ್ನ ಸುಖವು ನಿನ್ನಲ್ಲಿ ಹೊರತು ಬರೆಲ್ಲಿ ಸಿಗುವುದಿಲ್ಲ ||2|| ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ