ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ (೨)

ಕನ್ನಡ

ಸ್ತುತಿ ಮಾಡುವೆ ಕರ್ತನಿಗೆ ಅದ್ಭುತ ರಕ್ಷಕಗೆ (೨) ಜೀವಾಂತ್ಯ ದಿನವೆಲ್ಲ, ಯೇಸುವಿಗೊಬ್ಬರಿಗೆ (ನನ್ನ) (೨) ನನ್ನ ಮನದಲ್ಲಿ ನಿನ್ನ ಮಾತು, ನನ್ನ ಬಾಯಲ್ಲಿ ನಿನ್ನ ಹಾಡು (೨) ಸಾರುವೆ ಸುವಾರ್ತೆಯನ್ನು, ಎಲ್ಲಾ ಜನಗಳಿಗೆ (೨) ಆಶೀರ್ವದಿಸು ನಿನ್ನ ನಂಬುವವರಿಗೆ (೨) ||ಸ್ತುತಿ ಮಾಡುವೆ|| ನಿನ್ನ ವಾಕ್ಯದಂತೆ ನಡೆಯುವೆ ನಾ, ನಿನ್ನ ಆತ್ಮದಿ ತುಂಬಿಸು ನನ್ನ (೨) ಪರಿಶುದ್ಧ ಆತ್ಮನಿಂದ, ಸಾರುವೆ ಸುವಾರ್ತೆಯನ್ನ (೨) ಅಭಿಷೇಕಿಸು ನಿನ್ನ ನಂಬುವವರನ್ನ (೨) ||ಸ್ತುತಿ ಮಾಡುವೆ|| ನಿನ್ನ ನಾಮವೆ ಮಹಿಮೆ ಹೊಂದಲಿ, ನಿನ್ನ ರಾಜ್ಯಕ್ಕೆ ಎಲ್ಲರೂ ಬರಲಿ (೨) ಎಲ್ಲಾ ಜಾತಿ ಜನ, ನಿನ್ನನ್ನು ಸ್ತುತಿ ಮಾಡಲಿ (೨) ನಿನ್ನ ಬೆಳಕಲ್ಲಿ ಎಲ್ಲಾರು ನಡೆಯಲಿ (೨) ||ಸ್ತುತಿ ಮಾಡುವೆ||