ಸ್ತುತಿಗೆ ಪಾತ್ರನು ನೀನೇನಯ್ಯ

ಕನ್ನಡ

ಸ್ತುತಿಗೆ ಪಾತ್ರನು ನೀನೇನಯ್ಯ ಮಹಿಮೆ ಘನತೆ ನಿನಗೇನಯ್ಯಾ (2) ಯೇಸಯ್ಯಾ, ಯೇಸಯ್ಯಾ, ಯೇಸಯ್ಯಾ, ಯೇಸಯ್ಯಾ (2) 1.ನಿನ್ ಪ್ರೀತಿಯಿಂದಲೇ ನನ್ನನ್ನು ಕರೆಯುವೆ ನಿನ್ ಪ್ರೀತಿಯಿಂದಲೇ ನನ್ನನ್ನು ರಕ್ಷಿಸುವೆ (2) ಕಣ್ಣೀರು ಒರೆಸಲು ಬಂದವನೆ ನನ್ನನ್ನು ಕಾಯುವ ತಂದೆ ನೀನೆ (2) || ಯೇಸಯ್ಯಾ || 2.ಏನನ್ನು ಕೊಟ್ಟು ನಿನ್ನ ಋಣವನ್ನು ತೀರಿಸಲಿ ನಿನ್ ತ್ಯಾಗವನ್ನು ನಾ ಹೇಗೆ ಮರೆಯಲಿ (2) ನಿನ್ನ ದಯೆಯು ಚಿರಕಾಲವು ನಿನ್ನ ಪ್ರೀತಿಯು ಶಾಶ್ವತವು (2) || ಯೇಸಯ್ಯಾ ||