ಕನ್ನಡ
ಸ್ತುತಿಗಳಲ್ಲಿ ವಾಸಮಾಡುವ ಸ್ತುತಿಗೇ ಯೋಗ್ಯನು ನೀ
ಪರಿಶುದ್ಧ ಸ್ಥಳಗಳಲ್ಲಿ ವಾಸಮಾಡುವ ಪರಿಶುದ್ಧ ದೇವರು ನೀ
ಪರಿಶುದ್ಧನು ನೀನೆ ಪರಿಶುದ್ಧನು ನಿನ್ನನ್ನೆ ಆರಧಿಸುವೆ
1.ಈ ಲೋಕಕ್ಕೆ ನಿರೀಕ್ಷೆ ನೀನೆ
ನೀನಲ್ಲದೆ ರಕ್ಷಕರಿಲ್ಲ
ನಿನ್ನನೇ ನಂಬಿದವರು
ಲಜ್ಜೆಯಿಂದ ಕೆಡವುವುದಿಲ್ಲ
ಕೊರತೆ ಇಲ್ಲಾ ಯಾವ ಮೇಲಿಗು
ನನ್ನ ಕರ್ತನ ಸನ್ನಿಧಿಯಲ್ಲಿ – ಪರಿಶುದ್ಧನು
2.ಪರಲೋಕದಲ್ಲಿ ವಾಸಮಾಡುವ
ಜೀವಿಸುವ ದೇವರು ನೀನೇ
ಧೂತರೆಲ್ಲರು ಆರಾಧಿಸುವ
ಯಜ್ಞದ ಕುರಿಯ ದಾತನೇ
ಹಿರಿಯರೆಲ್ಲರು ಅಡ್ಡ ಬೀಳ್ವರು
ನೀ ನೊಬ್ಬನೇ ದೇವರೆಂದು – ಪರಿಶುದ್ಧನು
3.ಚಿಯೋನಿನಲ್ಲಿ ವಾಸಮಾಡುವ
ಸರ್ವೇಶ್ವರನು ನೀನೆ ಆಲಯದಲ್ಲಿ
ವಾಸಮಾಡುವ ಅದ್ಬುತ ದೇವರು ನೀನೆ
ನಿನ್ನ ಮಕ್ಕಳು ನಾವು ನಿನ್ನನೇ
ಎಂದು ಆರಾಧನೆ ಮಾಡುವೆವು – ಪರಿಶುದ್ಧನು