ಸ್ತುತಿಯ ವಸ್ತ್ರ ಧರಿಸಿ ದುಃಖವೆಲ್ಲಾ ಮರೆತು

ಕನ್ನಡ

ಸ್ತುತಿಯ ವಸ್ತ್ರ ಧರಿಸಿ ದುಃಖವೆಲ್ಲಾ ಮರೆತು ಸ್ತುತಿಸಿ ಹರ್ಷಿಸುವಾ ನಮ್ಮ ಕರ್ತನಲ್ಲಿ ಹರ್ಷಿಸುವಾ || 1)ಈ ದಿನ ಕರ್ತನಾದಿನ ಇದರಲ್ಲಿ ನಲಿದಾಡುವಾ || ದುಃಖವಿಲ್ಲ ಇನ್ನೂ ಶೋಕವಿಲ್ಲ ನಾವು ತಿನ್ನುತ್ತ ಕೊಡುತ್ತ ಕೊಂಡಾಡುವಾ || | ಸ್ತುತಿಸಿ ಸ್ತುತಿಸಿ ಹರ್ಷಿಸುವ ಶೋಕ ದುಃಖವ ಮರೆಯುವ |ಸ್ತುತಿಯ | 2)ಕರ್ತನಲ್ಲಿ ಇರೋ ಆನಂದವೆ ಎಂದೆಂದೂ ನಮ್ಮ ಬಲ || ಎಷ್ಟೆಷ್ಟೋ ನೆರವು ನೀಡಿರುವ ಇಂದು ಹಾಡಿ ಹೊಗಳಿ ಕೊಂಡಾಡುವ || 3)ದುಃಖಕ್ಕೆ ಪ್ರತಿ ಆನಂದವೆ ಎಂದು ಆನಂದ ಆನಂದವೆ || ಜಜ್ಜಲ್ಪಟ್ಟ ಮನವು ಓಡಿಹೋಗಿ ಇಂದು ಉತ್ಸಾಹ ಆತ್ಮ ಬಂದಿದೆ ||